Wednesday, March 31, 2010
ನಾ ಕವಿ ಎಂದು ಬರೆದ ಕವನವಿದಲ್ಲ....
ನಾ ಕವಿ ಎಂದು ಬರೆದಾ ಕವನವಿದಲ್ಲ
ಓ ನನ್ನ ಕಾವ್ಯಕನ್ನಿಕೆ ನೀನೇ ಒಲಿದಂಥ ಕವನ
ಈ ನನ್ನ ಸುಂದರ ಕವನ. ||ಪ||
ಯೌವನ ಕಾಂತಿ ಮಿಂಚಿದ ಕವನ
ಪ್ರೇಮ ವಸಂತ ಹರಸಿದ ಕವನ
ಪ್ರೀತಿ ಸಂಗೀತ ಹಾಡಿದ ಕವನ
ಈ ನನ್ನ ಶೃಂಗಾರ ಕವನ ||೧||
ಹೃದಯ ಸ್ಪೂರ್ತಿ ಸೆಳೆದ ಕವನ
ವಾತ್ಸಲ್ಯ ವೀಣೆ ನುಡಿಸಿದ ಕವನ
ಮಮತೆಯ ಮಡಿಲಲಿ ಬೆಳೆದ ಕವನ
ಈ ನನ್ನ ಕರುಣಾರಸ ಕವನ ||೨||
ಜಗದ ಚಿಂತನೆ ಕಲಕಿದ ಕವನ
ಜನಾರಣ್ಯದ ಭಯ ನೀಗಿದ ಕವನ
ಬದುಕಿನ ಪ್ರೀತಿಯೆ ಹೊಮ್ಮಿದ ಕವನ
ಈ ನನ್ನ ಧೀಮಂತ ಕವನ ||೩||
ಜೀವನ ಚೇತನ ಚಿಮ್ಮಿದ ಕವನ
ನೂತನ ಭಾವ ನೀಡಿದ ಕವನ
ಆತ್ಮನಿವೇದನೆ ಮಾಡಿದ ಕವನ
ಬ್ರಹ್ಮಾನಂದವೆ ಈ ನನ್ನ ಕವನ ||೪||
Subscribe to:
Posts (Atom)